Kannada
kn
HomeContact UsFAQBlog

ವಾಟ್ಸಾಪ್ ಬ್ಯುಸಿನೆಸ್ ಕ್ಯಾಟಲಾಗ್ ಫೀಚರ್ ಎಂದರೇನು

ವಾಟ್ಸಾಪ್ ಬ್ಯುಸಿನೆ ಎಂಬುದು ವಾಟ್ಸಾಪ್ ಮೆಸೆಂಜರ್ ಆಗಿದ್ದು ಇದು ಹೆಚ್ಚುವರಿ ಬ್ಯುಸಿನೆಸ್ ವೈಶಿಷ್ಟ್ಯಗಳನ್ನು ಹೊಂದಿದ್ದು ಇದು ರಿಸೆಲ್ಲಿಂಗ್ ಅನ್ನು ಸರಳ ಮತ್ತು ನಿಮ್ಮ ಬ್ಯುಸಿನೆಸ್ ಅನ್ನು ವೃತ್ತಿಪರವನ್ನಾಗಿಸುತ್ತದೆ. ‘ಕ್ಯಾಟಲಾಗ್’ ಫೀಚರ್ ಅನ್ನು ಇತ್ತೀಚೆಗೆ ಸೇರಿಸಲಾಗಿದ್ದು ಇದು ಬ್ಯುಸಿನೆಸ್ ಮಾಲೀಕರಿಗೆ ತಮ್ಮ ಪ್ರಾಡಕ್ಟ್ ಕ್ಯಾಟಲಾಗ್‌ಗಳನ್ನು ಪ್ರಮಾಣಿಕವಾಗಿ ತೋರಿಸಲು ಸಹಾಯ ಮಾಡುತ್ತವೆ.

ಈ ಫೀಚರ್ ಅನ್ನು ಏಕೆ ಬಳಸಬೇಕು?

  • ಇದು ನಿಮ್ಮದೇ ಅನ್ವೇಷಣೆಯ ಪ್ರಾಡಕ್ಟ್‌ಗಳನ್ನು ರಚಿಸಲು ಅನುಮತಿಸುತ್ತದೆ. ಈ ಹಿಂದೆ ಚಿತ್ರಗಳು ಮತ್ತು ವೀಡಿಯೊಗಳನ್ನು ಮೆಸೇಜ್ ಬಳಸಿಕೊಂಡು ಅಥವಾ ಸ್ಟೇಟಸ್ ಅಥವಾ ಬ್ರಾಡ್‌ಕಾಸ್ಟ್ ಆಯ್ಕೆಯನ್ನು ಬಳಸಿಕೊಂಡು ಹಂಚಿಕೊಳ್ಳಲಾಗುತ್ತದೆ. ಈ ಹೊಸ ಫೀಚರ್ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ನಿಮ್ಮನ್ನು ಕರೆದೊಯ್ಯತ್ತದೆ. 
  • ನಿಮ್ಮ ಗ್ರಾಹಕರು ಪ್ರಾಡಕ್ಟ್‌ಗಳನ್ನು ಅವರ ಅಗತ್ಯಕ್ಕೆ ಅನುಗುಣವಾಗಿ ಆರಿಸಬಹುದು ಮತ್ತು ಬ್ರೌಸ್ ಮಾಡಬಹುದು. 
  • ಇದು ಫೇಸ್‌ಬುಕ್ ಬ್ಯುಸಿನೆಸ್ ಪುಟಕ್ಕೆ ಸಮನಾಗಿದೆ ನಿಮ್ಮದೇ ಆದ ಸ್ವಂತ ಆನ್‌ಲೈನ್ ಶಾಪ್ ಅನ್ನು ನೀವು ರಚಿಸಬಹುದು. 
  • ಇದು ಅವರಿಗೆ ವೈಯಕ್ತಿಕವಾಗಿ ಮೆಸೇಜ್ ಮಾಡದೆಯೇ ನಿಮ್ಮ ಪ್ರಾಡಕ್ಟ್‌ಗಳನ್ನು ಪ್ರದರ್ಶಿಸಲು ಈ ಫೀಚರ್ ನಿಮ್ಮನ್ನು ಅನುಮತಿಸುತ್ತದೆ. ಇದು ಗ್ರಾಹಕರಿಗೆ ಯಾವುದೇ ತೊಂದರೆಯನ್ನುಂಟು ಮಾಡುವುದಿಲ್ಲ.
  • ನಿಮ್ಮ ಕ್ಯಾಟಲಾಗ್‌ಗಳನ್ನು ಒಮ್ಮೆ ನೀವು ಸೇವ್ ಮಾಡಿದ ನಂತರ, ಇದು ನಿಮ್ಮ ಬ್ಯುಸಿನೆಸ್ ಪ್ರೊಫೈಲ್‌ನ ಒಂದು ಭಾಗವಾಗುತ್ತದೆ. ನಿಮ್ಮ ಗ್ರಾಹಕರಿಗೆ ಅನುಕೂಲವಾದಾಗಲೆಲ್ಲಾ ಅವರು ಇದಕ್ಕೆ ಭೇಟಿ ನೀಡುತ್ತಾರೆ.
  • ನೀವು ಫ್ರಿಯಾಗಿದ್ದಾಗ ಈ ಕ್ಯಾಟಲಾಗ್‌ಗಳನ್ನು ರಚಿಸಬಹುದು. ಇದು ಸಮಯವನ್ನು ಉಳಿಸುತ್ತದೆ.

ಈ ಫೀಚರ್ ಅನ್ನು ಬಳಸುವುದು ಹೇಗೆ?

  • ಈ ಫೀಚರ್ ಬಳಸಲು, ಅಪ್ಲಿಕೇಶನ್‌ನಲ್ಲಿರುವ 'ಸೆಟ್ಟಿಂಗ್‌ಗಳ' ಆಪ್ಶನ್‌ಗೆ ಹೋಗಿ. 'ಬ್ಯುಸಿನೆಸ್ ಸೆಟ್ಟಿಂಗ್ಸ್' ಟ್ಯಾಪ್ ಮಾಡಿ ನಂತರ 'ಕ್ಯಾಟಲಾಗ್' ಆಪ್ಶನ್ ಟ್ಯಾಪ್ ಮಾಡಿ. ನಂತರ, ನಿಮ್ಮ ಪ್ರಾಡಕ್ಟ್ ಕ್ಯಾಟಲಾಗ್‌ಗಳನ್ನು ಪ್ಲಸ್ ಐಕಾನ್ ಟ್ಯಾಪ್ ಮಾಡುವ ಮೂಲಕ ಸೇರಿಸಲು ಆರಂಭಿಸಿ. ಬೆಲೆ ಮತ್ತು ವಿವರವನ್ನು ಇದಕ್ಕೆ ಸರಿಯಾಗಿ ಸೇರಿಸಿ.
  • ನಿಮ್ಮ ಅಪ್ಲಿಕೇಶನ್ ಅಪ್‌ಡೇಟ್ ಮಾಡಲಾಗಿದೆ ಎಂಬುದನ್ನು ಖಾತ್ರಿಪಡಿಸಿ.
  • ನಿಮ್ಮ ಪ್ರೊಫೈಲ್ ಮೇಲೆ ನಿಮ್ಮ ಗ್ರಾಹಕರು ಟ್ಯಾಪ್ ಮಾಡಿದಾಗ, ನಿಮ್ಮ ಕ್ಯಾಟಲಾಗ್‌ಗಳನ್ನು ಅವರು ನೋಡುತ್ತಾರೆ. ಕ್ಯಾಟಲಾಗ್ ಮೇಲೆ ಟ್ಯಾಪ್ ಮಾಡುವ ಮೂಲಕ, ಪ್ರಾಡಕ್ಟ್ ವಿವರಣೆಯನ್ನು ಅವರಿಗೆ ನೋಡಬಹುದು. ನಿರ್ದಿಷ್ಟ ಕ್ಯಾಟಲಾಗ್ ಪ್ರಾಡಕ್ಟ್ ಕುರಿತಂತೆ ನೀವು ನೇರವಾಗಿ ಅವರಿಗೆ ಮೆಸೇಜ್ ಮಾಡಲು ಸಹಕಾರಿಯಾಗುವಂತೆ 'ಮೆಸೇಜ್ ಬ್ಯುಸಿನೆಸ್' ಬಟನ್ ಇದೆ. 
  • ಯಾರಾದರೂ ಪ್ರಾಡಕ್ಟ್ ಬಗ್ಗೆ ಕೇಳಿದಲ್ಲಿ, ನೀವು ಅಪ್ಲಿಕೇಶನ್‌ನಿಂದ ನೇರವಾಗಿ ನಿಮ್ಮ ಕ್ಯಾಟಲಾಗ್ ಶೇರ್ ಮಾಡಬಹುದು ಇದನ್ನು ಮಾಡಲು ಅಟ್ಯಾಚ್‌ಮೆಂಟ್ ಬಟನ್ ಟ್ಯಾಪ್ ಮಾಡಿ ನಂತರ 'ಕ್ಯಾಟಲಾಗ್' ಆಯ್ಕೆಮಾಡಿ. ಉತ್ತಮ ಪ್ರಾಡಕ್ಟ್ ಆರಿಸಿ ಮತ್ತು ಹಂಚಿಕೊಳ್ಳಿ.

ಮೀಶೋ ಕ್ಯಾಟಲಾಗ್‌ಗಳನ್ನು ಸೇರಿಸುವುದು ಹೇಗೆ?

ವಾಟ್ಸಾಪ್ ಬ್ಯುಸಿನೆಸ್ ಕ್ಯಾಟಲಾಗ್ ಫೀಚರ್‌ನಲ್ಲಿ, ನಿಮ್ಮ ಫೋನ್ ಗ್ಯಾಲರಿಯಿಂದ ಅಥವಾ ಫೋನ್ ಕ್ಯಾಮೆರಾದ ಮೂಲಕ ಫೋಟೋ ಕ್ಲಿಕ್ಕಿಸುವ ಮೂಲಕ ನೀವು ಇಮೇಜ್‌ಗಳನ್ನು ಸೇರಿಸಬಹುದು. ಹಾಗಾಗಿ ನೀವು ಮೀಶೊದಿಂದ ಆದ್ಯತೆಯ ಕ್ಯಾಟಲಾಗ್‌ಗಳನ್ನು ಡೌನ್‌ಲೋಡ್ ಮಾಡಬೇಕು ಮತ್ತು ಡಿಸ್ಕ್ರಪ್ಶನ್ ಪಠ್ಯವನ್ನು ನಕಲಿಸಿ. ಇದೀಗ ನಿಮ್ಮ ಗ್ಯಾಲರಿಯಿಂದ ಅವುಗಳನ್ನು ಆಯ್ಕೆಮಾಡುವ ಮೂಲಕ 'ಕ್ಯಾಟಲಾಗ್' ಸೆಕ್ಶನ್‌ನಲ್ಲಿ ಚಿತ್ರಗಳನ್ನು ಸೇರಿಸಿ.

ವಾಟ್ಸಾಪ್ ಬ್ಯುಸಿನೆಸ್ ಕ್ಯಾಟಲಾಗ್ ಫೀಚರ್ ಎನ್ನುವುದು ಉಪಯೋಗಕಾರಿ ಟೂಲ್ ಆಗಿದ್ದು ನಿಮ್ಮ ಆನ್‌ಲೈನ್ ಶಾಪ್ ರಚಿಸಲು ಇದು ಸಹಕಾರಿಯಾಗಿದೆ. ಹಾಗಾದರೆ ಮುಂದುವರಿಯಿರಿ ಮತ್ತು ಈ ವೈಶಿಷ್ಟ್ಯದ ಉತ್ತಮ ಬಳಕೆಯನ್ನು ಮಾಡಿ. ಹ್ಯಾಪಿ ರಿಸೆಲ್ಲಿಂಗ್!